ಮಕ್ಕಳ ಶಿಸ್ತು ಬದ್ಧ ನಡವಳಿಕೆಯಲ್ಲಿ ಪೋಷಕರ ಪಾತ್ರ ಹಿರಿದಾದುದು. ತಪ್ಪಾದಾಗ ತಿದ್ದುವ, ಸೋತಾಗ ಸ್ಪೂರ್ತಿಯಾಗುವ ಆತ್ಮೀಯ ಗೆಳೆಯರು ನಾವಾಗಬೇಕು. ಆಡಳಿತ ಮಂಡಳಿ, ಶಿಕ್ಷಕ ವರ್ಗದೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಸಂಸ್ಥೆಯು...
ಕಾರ್ಗಿಲ್ ಯುದ್ಧ ಗೆದ್ದ ಸಂಭ್ರಮವೇ ಕಾರ್ಗಿಲ್ ವಿಜಯ್ ದಿವಸ್. ಪಾಕಿಸ್ತಾನದ ಭಯೋತ್ಪಾದಕರನ್ನು ಬಗ್ಗು ಬಡಿದು ವಿಜಯ ಸಾಧಿಸಿದ ದಿನ. ದೇಶ ಸೇವೆಯ ಪವಿತ್ರ ಕೈಂಕರ್ಯಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅದೆಷ್ಟೋ ವೀರ ಯೋಧರು ನಮ್ಮ ಕಣ್ಣ ಮುಂದೆ ಮಿಂಚಿ ಮರೆಯಾಗ್ತಾರೆ. ಗಡಿ...
ಭಾರತದ ಬಗ್ಗೆ ಮಾತನಾಡುವಾಗ ಸ್ವಾಭಾವಿಕವಾಗಿ ಆತ್ಮದೊಳಗಿನಿಂದ ಉತ್ಸಾಹ, ಭಾವುಕತೆ, ದೇಶಾಭಿಮಾನ ಮೂಡಿ ಬರುತ್ತದೆ. ಭಾರತಕ್ಕೆ ಭಾರತವೇ ಸಾಟಿ. ಏಕೆಂದರೆ ತನಗೆ ಎದುರಾದ ಎಲ್ಲಾ ವಿಷಮ ಸಂದರ್ಭಗಳಲ್ಲೂ ತಾಳ್ಮೆಯಿಂದ ತನ್ನ ಅಂತಃಶ್ಚೈತನ್ಯವನ್ನು ಕೂಡಿಕೊಂಡು ಎದ್ದು ನಿಲ್ಲುತ್ತದೆಯೇ ಹೊರತು ಕುಗ್ಗುವುದಿಲ್ಲ. ಭಾರತದಲ್ಲಿ ನೂರಕ್ಕೂ ಹೆಚ್ಚು...
ಭಾರತದಲ್ಲಿ ಆದಾಯ ಸಮಾನತೆ ಮನಗಂಡು ಹೊಸ ತೆರಿಗೆ ಪದ್ಧತಿ ಜಾರಿ ಮಾಡಲಾಗಿದೆ. ಹಲವು ಸರಕುಗಳನ್ನು ಜಿ ಎಸ್ ಟಿ ತೆರಿಗೆ ಪದ್ಧತಿಯಿಂದ ಹೊರಗಿಡಲಾಗಿದೆ. ಸೇವಾ ವಲಯ ಹಾಗೂ ಕೈಗಾರಿಕಾ ವಲಯ ಬೆಳೆಯಲು ಇದು ಸಹಕಾರಿಯಾಗಿದೆ. ಅನುಷ್ಠಾನದ ಪ್ರಥಮ ಹಂತದಲ್ಲಿ ವ್ಯಾಪಾರದ ಮೇಲೆ...
ವ್ಯಕ್ತಿತ್ವ ಮತ್ತು ಸಾಮಾಜಿಕ ಪ್ರಜ್ಞೆಗಳನ್ನು ಮಾನವ ಜೀವನದಲ್ಲಿ ಸಂಘರ್ಷವಿಲ್ಲದಂತೆ ಹೊಂದಾಣಿಸಿ ಪೋಷಿಸಿ ಬೆಳೆಸುವುದೇ ಶಿಕ್ಷಣದ ಉದ್ದೇಶ. ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಕೇವಲ ಪಠ್ಯವಿಷಯವನ್ನು ಬೋಧಿಸದೇ ಸಮಗ್ರ ಜೀವನಾನುಭವಗಳನ್ನೂ ಕಟ್ಟಿಕೊಡಬೇಕು. ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿಚಾರಧಾರೆಯ ಜೀವನ ಮೌಲ್ಯಗಳನ್ನೊಳಗೊಂಡ ಶಿಕ್ಷಣವನ್ನು ಧಾರೆ ಎರೆಯಲು, ಉಪನ್ಯಾಸಕರಿಗೆ ಈ...
ನಾಯಕತ್ವದ ಬೆಳವಣಿಗೆಗೆ ಹಾಗೂ ಆರೋಗ್ಯಯುತ ಪ್ರಜಾಪ್ರಭುತ್ವದ ನಿರ್ಮಾಣಕ್ಕೆ ವಿದ್ಯಾರ್ಥಿಸಂಘಗಳು ಮಾರ್ಗಸೂಚಿಗಳಾಗಲಿವೆ. ಭವಿಷ್ಯಕ್ಕೆ ಭದ್ರ ಬುನಾದಿ ಕಲ್ಪಿಸಬಲ್ಲ ಶಕ್ತಿ ಇರುವ ವಿದ್ಯಾರ್ಥಿ ಜೀವನದಲ್ಲಿ, ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಲ್ಲಿ ಉತ್ತಮ ಪ್ರಜೆಗಳಾಗಿ ಬದುಕಲು ಸಾಧ್ಯ. ಜಗತ್ತಿನ ಕತ್ತಲೆಯನ್ನು ಹೋಗಲಾಡಿಸುವ ಅಗಾಧ ಶಕ್ತಿ ವಿದ್ಯಾರ್ಥಿಗಳಲ್ಲಿದೆ. ಉತ್ತಮ...
ಯೋಗಾಭ್ಯಾಸವು ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಸಾಧನ.ಯೋಗದ ನಿರಂತರ ಅಭ್ಯಾಸದಿಂದ ಮನೋನಿಯಂತ್ರಣ, ಇಂದ್ರಿಯ ನಿಗ್ರಹ,ಅಧಿಕ ಕಾರ್ಯೋತ್ಸಾಹ ಮೊದಲಾದ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬಹುದು. ಪಾರಮಾರ್ಥಿಕ ಸತ್ಯದೆಡೆಗೆ, ಆತ್ಮದ ಅರಿವನ್ನು ಪಡೆಯುವುದರೆಡೆಗೆ ಸಾಗಲು, ಮನುಷ್ಯರಿಗೆ ನೆರವಾಗುವಂತದ್ದೆಲ್ಲವೂ ಯೋಗವೇ. ಇದು ಯಾವುದೇ ಜಾತಿ, ಮತ, ಧರ್ಮಕ್ಕೆ ಸೀಮಿತವಾಗಿರದೆ,...
ವರದಿಗಾರಿಕೆ ಒಂದು ಕಲೆ. ಇದು ಸ್ವಯಂಚಾಲಿತವಾಗಿ ಒಬ್ಬರ ಭಾಷಾ ಕೌಶಲ್ಯವನ್ನು ಸುಧಾರಿಸುತ್ತದೆ. ಸಮಾಜಕ್ಕೆ ಸಹಕಾರಿಯಾಗುವಂತಹ ಸಂಗತಿಗಳನ್ನು ಪ್ರಬಲ ಮಾಧ್ಯಮವಾದ ಪತ್ರಿಕೆ ಅಥವಾ ನಿಯತಕಾಲಿಕೆಗಳ ಮೂಲಕ ಸಹೃದಯರಿಗೆ ತಲುಪಿಸುವ ಕೆಲಸ ವರದಿಗಾರಿಕೆಯಿಂದಾಗುತ್ತದೆ. ಆಧುನಿಕ ಪ್ರಪಂಚದ ಪ್ರಚಲಿತ ವಿದ್ಯಾಮಾನಗಳ, ಬದಲಾಗುತ್ತಿರುವ ಜನ ಜೀವನದ ಬಗ್ಗೆ...