ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣಾವಕಾಶಗಳ ಬಗ್ಗೆ ಮಾಹಿತಿ ಕಾರ್ಯಕ್ರಮ

“ಯಾವುದೇ ದೇಶದ ಸಾಮಾಜಿಕ-ಆರ್ಥಿಕ ಪ್ರಗತಿಯಲ್ಲಿ ವಾಣಿಜ್ಯದ ಪಾತ್ರ ಬಹುದೊಡ್ಡದು.ವಾಣಿಜ್ಯ ಕ್ಷೇತ್ರವು ವಿದ್ಯಾರ್ಥಿಗಳಿಗೆ ಉದ್ಯೋಗದ ಮಹಾಪೂರವನ್ನೇ ಸೃಷ್ಟಿಸಿದೆ.ವಾಣಿಜ್ಯ ವಿಷಯದಲ್ಲಿ ಬ್ಯಾಚುಲರ್ ಮತ್ತು ಮಾಸ್ಟರ್ಸ್ ಪದವಿ ಅವಕಾಶಗಳ ಹೆಬ್ಬಾಗಿಲನ್ನೇ ತೆರೆಯುತ್ತದೆ.ವ್ಯಾಪಾರ , ವಾಣಿಜ್ಯ ಮತ್ತು ಕೈಗಾರಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಬೇಕಾದ ನಡತೆ,ಕೌಶಲ್ಯ ಮತ್ತು ಜ್ಞಾನವನ್ನು ವಾಣಿಜ್ಯ ವಿಷಯದ ವಿದ್ಯಾರ್ಥಿಗಳಲ್ಲಿ ತುಂಬಲು ಅದಕ್ಕೆ ಪೂರಕವಾದ ತರಬೇತಿಯ ಅವಶ್ಯಕತೆಯಿದೆ.ಈಗಿನ ಸ್ಪರ್ಧಾತ್ಮಕ ಉದ್ಯಮದ ವಾತಾವರಣದಲ್ಲಿ ಬೇಕಾದ ಕೌಶಲ್ಯವನ್ನು ವಿದ್ಯಾರ್ಥಿಗಳಿಗೆ ಇಂತಹ ತರಬೇತಿಗಳು ಒದಗಿಸುತ್ತದೆ.”ಎಂದು ವಿವೇಕಾನಂದ ಮಹಾವಿದ್ಯಾಲಯದ ಬ್ಯುಸಿನೆಸ್ ಅಡ್‍ಮಿನಿಸ್ಟ್ರೇಶನ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ರೇಖಾ ಹೇಳಿದರು.


ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ನಡೆದ ವಾಣಿಜ್ಯ ಕ್ಷೇತ್ರದಲ್ಲಿ ಶಿಕ್ಷಣಾವಕಾಶಗಳ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಿಯುಸಿ ಬಳಿಕ ವಾಣಿಜ್ಯ ವಿಷಯದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾದ ,ಉದ್ಯೊಗ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವ ವಿವಿಧ ಕೋರ್ಸ್‍ಗಳ ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಮತ್ತು ವಾಣಿಜ್ಯ ಸಂಘದ ಸಂಯೋಜಕರಾದ ಶ್ರೀಮತಿ ಸೌಮ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸುಭಾಷಿತ ಸ್ವಾಗತಿಸಿ,ನಿಶ್ಮಿತಾ ವಂದಿಸಿದರು.