“ಅಪ್ರತಿಮ ದೇಶಭಕ್ತ,ಮಹಾನ್ ಕ್ರಾಂತಿಕಾರಿ,ದೂರದೃಷ್ಟಿಯ ರಾಜಕೀಯ ನೇತಾರ ಹಾಗೂ ಶ್ರೇಷ್ಠ ಚಿಂತಕ ವೀರ ಸಾವರ್ಕರ್.ತಮ್ಮ ಜೀವನವನ್ನು ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ನಾಯಕ.ಸ್ವಾತಂತ್ರ್ಯ ಹೋರಾಟ,ಹಿಂದುತ್ವದ ಬಗ್ಗೆ ಇವರು ತೆಗೆದುಕೊಂಡ ನಿಲುವುಗಳು ಈಗಲೂ ಯುವಕರಿಗೆ ಸ್ಪೂರ್ತಿದಾಯಕ .” ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಂಸ್ಕಾರ ಪರಿವೀಕ್ಷಣಾ ಪ್ರಮುಖ್ ಆದ ಮೀನಾಕ್ಷಿ ರವರು ಹೇಳಿದರು.
“ಇಂದು ನಮ್ಮ ಭಾರತ ಬ್ರಿಟಿಷರಿಂದ ಮುಕ್ತವಾಗಿದೆ.ಆದರೆ ಭ್ರಷ್ಟಾಚಾರ,ನಿರುದ್ಯೋಗ,ಅಪ್ರಾಮಾಣಿಕತೆ ಅದನ್ನು ಒತ್ತೆಯಾಳಾಗಿರಿಸಿದೆ.ಇದರಿಂದ ನಾವು ಸ್ವಾತಂತ್ರ್ಯಕ್ಕಾಗಿ ಕ್ರಾಂತಿಯನ್ನು ತರಬೇಕಾಗಿದೆ. ಮತ್ತು ನಮ್ಮ ದೇಶದ ಯುವ ಶಕ್ತಿ ಮತ್ತೊಮ್ಮೆ ಜಾಗೃತಗೊಳ್ಳಬೇಕಾಗಿದೆ.ಈ ನಿಟ್ಟಿನಲ್ಲಿ ವೀರ ಸಾವರ್ಕರ್ ನಂತಹ ಭಾರತಮಾತೆಯ ಹೆಮ್ಮೆಯ ಪುತ್ರರು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಚಿರಸ್ಥಾಯಿಯಾಗಬೇಕಿದೆ .”ಎಂದು ಹೇಳಿದರು.
ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ-ವೀರ ಸಾವರ್ಕರ್ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾದ ಶ್ರೀಮತಿ ಪ್ರಭಾವತಿ ಸ್ವಾಗತಿಸಿ,ವಂದಿಸಿದರು.