ಇಂಟರ್ನೆಟ್ ಮಾರ್ಕೆಟಿಂಗ್ ಬಗ್ಗೆ ಮಾಹಿತಿ ಕಾರ್‍ಯಕ್ರಮ

ಇಂಟರ್ನೆಟ್ ಮಾರ್ಕೆಟಿಂಗ್ ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾರುಕಟ್ಟೆ ಪ್ರಚಾರ ಒದಗಿಸುವ ಇಂಟರ್ನೆಟ್ ಮಾರ್ಕೆಟಿಂಗ್ ಕುರಿತು ಹೆಚ್ಚಿನ ಕಂಪೆನಿಗಳು ಆದ್ಯತೆ ನೀಡುತ್ತಿವೆ. ಕಡಿಮೆ ವೆಚ್ಚ ಮಾತ್ರವಲ್ಲದೆ ಬಳಕೆ ಮಾಡಲು ಸುಲಭವಾಗಿದೆ ಮತ್ತು ಎಷ್ಟು ಗ್ರಾಹಕರನ್ನು ತಲುಪಿದೆ ಎಂಬ ವಿವರವನ್ನು ಈ ಮಾರ್ಕೆಟಿಂಗ್ ವಿಧಾನದಲ್ಲಿ ತಕ್ಷಣ ದೊರಕುತ್ತದೆ. ಹೀಗಾಗಿ ದೇಶದ ಸಣ್ಣ ಮಧ್ಯಮ ಅಥವಾ ದೊಡ್ಡ ಕಂಪನಿಗಳು ಸೇರಿದಂತೆ ಎಲ್ಲಾ ವ್ಯವಹಾರಗಳು ಇಂಟರ್ನೆಟ್ ಮಾರ್ಕೆಟಿಂಗ್ ವೃತ್ತಿಪರರನ್ನು ನೇಮಿಸುತ್ತಿವೆ ಎಂದು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕರಾದ ಡಾ. ವಿಜಯ ಸರಸ್ವತಿ ಹೇಳಿದರು.

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ನಡೆದ ಇಂಟರ್ನೆಟ್ ಮಾರ್ಕೆಟಿಂಗ್ ಬಗ್ಗೆ ಮಾಹಿತಿ ಕಾರ್‍ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಮಾರ್ಕೆಟಿಂಗ್­ನ ಮಹತ್ವ ಮತ್ತು ಅದರಿಂದ ಮುಂದಿನ ದಿನಗಳಲ್ಲಿ ಸಿಗುವ ಉದ್ಯೋಗಾವಕಾಶಗಳ ಬಗ್ಗೆ ವಿಸ್ತಾರವಾಗಿ ವಿವರಿಸಿದರು. ಸಾಂಪ್ರದಾಯಿಕ ಮಾರ್ಕೆಟಿಂಗ್ ಗಿಂತ ಇಂಟರ್ನೆಟ್ ಮಾರ್ಕೆಟಿಂಗ್­ನ ಪ್ರಯೋಜನಗಳನ್ನು ತಿಳಿಸಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ವಾಣಿಜ್ಯ ಸಂಘದ ಸಂಯೋಜಕರಾದ ಶ್ರೀಮತಿ ಸೌಮ್ಯ ಮತ್ತು ಶ್ರೀಮತಿ ಅಕ್ಷತಾ ಭಾಗವಹಿಸಿದ್ದರು. ಕಾರ್‍ಯಕ್ರಮದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಆಶಿತಾ ಸ್ವಾಗತಿಸಿ, ರಚನಾ ವಂದಿಸಿದರು.