ವಿದ್ಯಾರ್ಥಿಗಳಿಂದ ಶ್ರೀ ಜಯಗುರು ಆಚಾರ್ ಅವರ ಹಿಂದಾರು ಗೋಶಾಲೆಗೆ ಭೇಟಿ

ನೂತನ ಶಿಕ್ಷಣ ನೀತಿಯ ಹಿನ್ನಲೆಯಲ್ಲಿ ಪ್ರಾಯೋಗಿಕ ಪಾಠಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಮುಂಡೂರು ಸಮೀಪದ ಜಯಗುರು ಆಚಾರ್ ಎಂಬವರ ಹಿಂದಾರು ಗೋಶಾಲೆಗೆ ಸುಮಾರು 50 ವಿದ್ಯಾರ್ಥಿಗಳು ಶೈಕ್ಷಣಿಕ ಭೇಟಿ ನೀಡಿದರು.

ಸುಮಾರು 130 ಹಸುಗಳನ್ನು ಇಲ್ಲಿ ಸಾಕುತ್ತಿದ್ದು ಅದಕ್ಕೆ ಬೇಕಾದ ಮೇವಿನ ವ್ಯವಸ್ಥೆ, ಹಾಲಿನ ಡೈರಿ, ಸೆಗಣಿಯನ್ನು ಘನ-ದ್ರವ ರೂಪದಲ್ಲಿ ಬೇರ್ಪಡಿಸುವ ಯಂತ್ರ, ಹಾಲು ಕರೆಯುವ ಯಂತ್ರ, ಗೋನಂದಾ ಜಲ, ಹಾಲಿನ ಉತ್ಪನ್ನಗಳು ಹೀಗೆ ಹೈನುಗಾರಿಕೆಯು ವ್ಯವಸ್ಥಿತವಾಗಿ ಉಪಕರಣಗಳನ್ನು ಬಳಸಿಕೊಂಡಾಗ ಲಾಭದಾಯಕವಾಗುವುದರಲ್ಲಿ ಸಂಶಯವಿಲ್ಲ ಎಂದು ಮಾಲಕರಾದ ಜಯಗುರು ಆಚಾರ್ ರವರು ವಿದ್ಯಾರ್ಥಿಗಳಿಗೆ ವಿವರಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್, ಉಪನ್ಯಾಸಕರಾದ ವಿಘ್ನೇಶ, ಶೈಲಾ, ಕೃತಿಕಾ, ಸತೀಶ್, ಹಿಂದಾರು ಮನೆಯವರಾದ ಭಾಸ್ಕರ್ ಆಚಾರ್ ದಂಪತಿಗಳು, ಜಯರಾಜ್ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.