ಧ್ಯಾನವು ನಮ್ಮನ್ನು ಮಾನಸಿಕವಾಗಿ ಸಬಲರನ್ನಾಗಿ ಮಾಡಿ ಯಾವುದೇ ಪರಿಸ್ಥಿತಿಯಲ್ಲಿಯೂ ತಕ್ಷಣ ಪ್ರತಿಕ್ರಿಯಿಸುವ ಪ್ರವೃತ್ತಿಯನ್ನು ಕಡಿಮೆ ಮಾಡಿ ಪ್ರತಿಸ್ಪಂದಿಸುವ ಪ್ರವೃತ್ತಿಯನ್ನು ಹೆಚ್ಚಿಸುತ್ತದೆ. ಧ್ಯಾನವು ಭಾವನಾತ್ಮಕ ಚೇತರಿಕೆಯ ಗುಣವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಸಂಪೂರ್ಣಅರಿವಿನೊಂದಿಗೆ ಕಾರ್ಯೋನ್ಮುಖರಾಗುತ್ತೇವೆ ಎಂದು ಹಾರ್ಟ್ ಫುಲ್ನೆಸ್ ಸಂಸ್ಥೆಯವರಾದ ನಳಿನಿ ಹೇಳಿದರು.
ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಆಗಸ್ಟ್ 26 ರಿಂದ 28 ರವರೆಗೆ ಮೂರು ದಿನಗಳ ಕಾಲ ನಡೆದ ಧ್ಯಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಧ್ಯಾನದ ಮಹತ್ವವನ್ನು ಪ್ರಾಯೋಗಿಕ ಅಭ್ಯಾಸದ ಮೂಲಕ ತಿಳಿಸಿದರು.
ಈ ಕಾರ್‍ಯಕ್ರಮದಲ್ಲಿ ನರೇಂದ್ರ ಪದವಿ ಪೂರ್ವಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ರೂಪಲೇಖ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ವಸಂತಿ ಕೆದಿಲ,ಹಾರ್ಟ್ ಫುಲ್ನೆಸ್ ಸಂಸ್ಥೆಯ ಸದಸ್ಯರಾದ ಶ್ರೀಮತಿ ಸುನಿತಿ,ಶ್ರೀಮತಿ ನೇತ್ರ ಪೈ ,ಮತ್ತು ದಿವಾಕರ, ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಮತ್ತು ಎಲ್ಲಾ ಉಪನ್ಯಾಸಕ, ಉಪನ್ಯಾಸಕೇತರ ವರ್ಗದವರು, ಮತ್ತು ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಉಪನ್ಯಾಸಕರಾದ ಸೂರ್‍ಯನಾರಾಯಣ ಸ್ವಾಗತಿಸಿ, ಕು. ನಾಗಶ್ರೀ ವಂದಿಸಿದರು.