ಅಜ್ಞಾನವು ತುಂಬಿರುವಾಗ ಹುಟ್ಟಿ ಬಂದವರು ವ್ಯಾಸರು- ಡಾ. ಶ್ರೀಶ ಕುಮಾರ್
ದೇಶದ ಜನತೆಯ ತುಂಬಾ ಅಜ್ಞಾನವು ತುಂಬಿರುವಾಗ ಹುಟ್ಟಿ ಬಂದವರು ವೇದವ್ಯಾಸರು. ವ್ಯಾಸರು ಹುಟ್ಟಿದ ಬಳಿಕ ಭಾರತದಲ್ಲಿ ಜ್ಞಾನದ ಬೆಳಕು ಪ್ರಜ್ವಲಿಸಿತು. ಜಾಗತಿಕವಾದ ಎಲ್ಲಾ ಕಡೆಯಲ್ಲೂ ಉಪಯೋಗಿಸುವ ಸೂತ್ರವನ್ನು ಕೊಟ್ಟವರು ವ್ಯಾಸರು. ವೇದವ್ಯಾಸರು ಭಗವದ್ಗೀತೆಯ ಕರ್ತೃ, ಸೂತ್ರದಾರ ಮತ್ತು ಪಾತ್ರದಾರ. ಮಹಾಭಾರತದಲ್ಲಿ ಮಹತ್ತರ ಪಾತ್ರವನ್ನು ವಹಿಸಿದ ವೇದವ್ಯಾಸರು ನಮಗೆ ತಿಳಿಸಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡಿಯಬೇಕಿದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕರಾದ ಡಾ. ಶ್ರೀಶ ಕುಮಾರ್ ಅವರು ಹೇಳಿದರು.
ಅವರು ತೆಂಕಿಲದ ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾದ ವ್ಯಾಸ ಜಯಂತಿ ಮತ್ತು ಯೋಧ ನಮನ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಯೋಧರಿಗೆ ನಮನವನ್ನು ಸಲ್ಲಿಸುತ್ತಾ ಮಾತನಾಡಿದ ಅವರು ‘ಈ ದೇಶವನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಹೊತ್ತಿರುವ ಸೈನಿಕರನ್ನು ಸ್ಮರಿಸಿಕೊಳ್ಳುವುದು ಅತ್ಯಗತ್ಯ. ದೇಶದ ಗಡಿ ಕಾಯುವ ಯೋಧರ ಶ್ರದ್ಧೆ ಮತ್ತು ಅಪಾರ ದೇಶ ಪ್ರೇಮ, ತ್ಯಾಗ ನಮಗೆ ಆದರ್ಶ ವಾಗಬೇಕು. ನಾವೆಲ್ಲರೂ ಸುಖದಲ್ಲಿ ವಿರಮಿಸಲು ಕಾರಣ ಸೈನಿಕರು. ಕಾರ್ಗಿಲ್ ಒಂದು ಜಾಗವಲ್ಲ ಅದು ಒಂದು ಸ್ಮರಣಿಕೆ ಸಂಕೇತ ಎಂದು ಈ ಸಂದರ್ಭದಲ್ಲಿ ಹೇಳಿದರು.