ದೇಶ ಕಟ್ಟುವ ಕಾರ್ಯಕ್ಕೆ ಶಿವಾಜಿಯ ರಾಷ್ಟ್ರ ಭಕ್ತಿ ಯುವ ಜನತೆಗೆ ಆದರ್ಶವಾಗಬೇಕು- ಶ್ರೀ ಅಚ್ಯುತ ನಾಯಕ್
ದೇಶ ಕಟ್ಟುವ ಕಾರ್ಯಕ್ಕೆ ಶಿವಾಜಿಯ ಸಾಹಸ, ಛಲ ಮತ್ತು ರಾಷ್ಟ್ರ ಭಕ್ತಿ ಯುವ ಜನತೆಗೆ ಆದರ್ಶವಾಗಬೇಕು ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಅಚ್ಯುತ ನಾಯಕ್ ಅವರು ಹೇಳಿದರು. ಅವರು ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾದ ಶಿವಾಜಿ ಪಟ್ಟಾಭಿಷೇಕ ದಿನಾಚರಣೆಯಲ್ಲಿ ಶಿವಾಜಿಯ ಜೀವನ ಗಾಥೆಯನ್ನು ವಿದ್ಯಾರ್ಥಿಗಳೆದುರು ತೆರೆದಿಡುತ್ತಾ ಹೇಗೆ ಮತ್ತು ಯಾಕೆ ಬೇರೆ ಬೇರೆ ರೀತಿಯಲ್ಲಿ ತಮ್ಮ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದೇಶಕ್ಕಾಗಿ ಕೆಲಸ ಮಾಡಬೇಕು ಎಂದು ತಿಳಿಯಪಡಿಸಿದರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ರೂಪಲೇಖ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಶ್ರೀಮತಿ ಹರಿಣಿ ಪುತ್ತೂರಾಯರು ಸ್ವಾಗತಿಸಿ ವಂದಿಸಿದರು.