ಈ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಅನೇಕರ ಹೋರಾಟದ ಕೆಚ್ಚು, ತ್ಯಾಗ, ಬಲಿದಾನದ ವಿಷಯಗಳ ಮಾಹಿತಿಯನ್ನು ಪಡೆದಾಗ, ಪುಸ್ತಕಗಳಲ್ಲಿ ಓದಿದಾಗ ಮಾತ್ರ ಸ್ವಾತಂತ್ರ್ಯದ ನಿಜವಾದ ಮೌಲ್ಯ ದೊರಕಲು ಸಾಧ್ಯ. ಪ್ರಸ್ತುತ ಸಮಾಜದಲ್ಲಿ ಹೀರೋ ಅಂದರೆ ಸಿನೆಮಾ ಲೋಕಕ್ಕೆ ಮಾತ್ರ ಸೀಮಿತ ಎಂಬ ಸಂಕುಚಿತ ಆಲೋಚನೆ ಯುವ ಪೀಳಿಗೆಯಲ್ಲಿದೆ. ಈ ಮನೋಭಾವದಿಂದ ಹೊರಬಂದು ಈ ದೇಶವನ್ನು ಕಟ್ಟಿದ ಮಂಗಲ್ ಪಾಂಡೆ, ರಾಣಾ ಪ್ರತಾಪ್ ಸಿಂಗ್, ಭಗತ್ ಸಿಂಗ್ ಇವರಂತಹ ಧೀಮಂತ ನಾಯಕರುಗಳು ನಮ್ಮ ಮಾದರಿಯಾಗಬೇಕು ಎಂದು ಡಾ. ರೋಹಿಣಾಕ್ಷ ಶಿರ್ಲಾಲು ಇವರು ಹೇಳಿದರು.
ಅವರು ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಸಂಯೋಜಿಸಲಾದ ಉಪನ್ಯಾಸ ಮಾಲಿಕೆಯಲ್ಲಿ “ದೇಶ ಕಟ್ಟಿದ ವೀರರು” ಎಂಬ ವಿಷಯವಾಗಿ ಮಾತನಾಡುತಿದ್ದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ವೀಕ್ಷಾ ಸ್ವಾಗತಿಸಿ, ಅಶ್ವಿತ್ ವಂದಿಸಿದರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಹರಿಣಿ ಪುತ್ತೂರಾಯ ಮತ್ತು ವಾಣಿಜ್ಯ ವಿಭಾಗದ ಉಪನ್ಯಾಸಕಿ ಕುಮಾರಿ ವಿನಯಾ ಉಪಸ್ಥಿತರಿದ್ದರು.